ಗೆ,
ಪ್ರೇಯಸಿ,
ವಿಳಾಸ: ನನ್ನ ಕಲ್ಪನೆ
ಪ್ರೀತಿಯ ಪ್ರೇಯಸಿ,
ಎಷ್ಟು ಸುಂದರ ಈ ಪ್ರಕೃತಿ ಆ ಸುಮಧುರ ಆಕೃತಿ,
ನಾ ಸವಿದೆ ನಿನ್ನೆಯ ಮಾತಿನ ಸುಕೃತಿ,
ದೂರುವೆ ನನ್ನ ನಾನೇ ಪ್ರತಿಕ್ಷಣ
ಹೇಳಬೇಕಿತ್ತು ನಾ ನಿನ್ನನು ಪ್ರೀತಿಸುವೆ ಹೇಗೆ ಕ್ಷಣ-ಕ್ಷಣ
ನನ್ನೆಯ ರೀತಿ ನಿನ್ನೆಯ ಪ್ರೀತಿ ಪ್ರತಿ ಗಳಿಗೆ,
ಮರಳಿಹೋಗಳಾಗದು ಆ ಕ್ಷಣಗಳಿಗೆ,
ಕೇಳು ಹೇಳುವೆ ಒಂದು ಮಾತು ಇತ್ತು ನನ್ನೆಯ ಒಳಗೆ,
ಮಳೆಯ ಹನಿಯ ಎಣಿಸಲಾಗದು,
ಆಕಾಶದ ಚಂದ್ರ ತಾರೆಗಳನ್ನು ಗುಣಿಸಲಾಗದು,
ಯಾರ ಅಂದವು ಇಷ್ಟು ಚಂದ ವರ್ಣಿಸಲಾಗದು,
ನಿನ್ನನು ನನ್ನಸ್ಟು ಯಾರಿಂದಲೂ ಪ್ರೀತಿಸಲಾಗದು..
ಮಧುರ ಕ್ಷಣಗಳಷ್ಟೇ ಅಲ್ಲ ಪ್ರೀತಿ,
ಪ್ರಾಯದ ಜೊತೆ ಪ್ರೀತಿಯೂ ಕಳೆಯಬಹುದು ಅದೇ ಜಗದ ನೀತಿ,
ಎಷ್ಟೇ ಕಷ್ಟಗಳಗಲಿ ಉದಯ,
ಕುಗ್ಗದು ನಮ್ಮದು ಎರಡು ಜೀವ ಒಂದೇ ಹೃದಯ…
ಕವನ ಕಣ್ಣಿಗೆ ಕಂಡರು ಎಷ್ಟೇ
ನಿನ್ನ ಪ್ರೀತಿ ಮಾಡುವೆ ಎಷ್ಟು ಎಂದು ಗೊತ್ತು ನನಗಷ್ಟೇ,
ಹೋಳೆಯುತಿರಲಿಲ್ಲ ನಿನ್ನೆದುರು ಪದಗಳೇ ಮುಂಚೆ,
ನೀ ಹೋದ ಮೇಲೆ ಕವಿ ಯಾದೆ ಇದು ದೇವರಾ ಸಂಚೇ….?-ಇಂದ
ನೀ ಹೋದ ಮೇಲೆ ಕವಿ ಯಾದೆ ಇದು ದೇವರಾ ಸಂಚೇ….?
Just a try 😅 Please don't judge me 😆
LikeLike
Bro u gotta teach me how you do these amazing stuff man 🤘✨✨
LikeLike